ಸಾರ್ವಜನಿಕ ಉಪಕಾರ ನಿಧಿಯಿಂದ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ

ಸಂಘದ ಸಾರ್ವಜನಿಕ ಉಪಕಾರ ನಿಧಿಯಿಂದ ಈ ಕೆಳಗೆ ವಿವರಿಸಲಾದ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ ದಿನಾಂಕ 04-10-2024 ರಂದು ಸಂಘದ ಪ್ರಧಾನ ಕಚೇರಿಯ ಶ್ರೀ ಬೈಲೂರು ಮಂಜುನಾಥ ಶೆಣೈ ಸಭಾಭವನದಲ್ಲಿ ಜರಗಿತು.

ಸಂಘದ ಉಪಾಧ್ಯಕ್ಷ ಶ್ರೀ ಜಿ. ವೆಂಕಟೇಶ ಶೆಣೈ, ಉಪಾಧ್ಯಕ್ಷ ಶ್ರೀ ಜಿ. ವಿಶ್ವನಾಥ ಆಚಾರ್ಯ ಹಾಗೂ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕರಾದ ಶ್ರೀ ಎಚ್. ಗಣೇಶ್ ಕಾಮತ್ ಕೊಡುಗೆಗಳನ್ನು ಹಸ್ತಾಂತರಿಸಿದರು.

ಸಮಾರಂಭದಲ್ಲಿ ಸರಸ್ವತಿ ವಿದ್ಯಾಲಯ ಶಿಕ್ಷಣ ಸಂಸ್ಥೆಗೆ ರೂ 1.20 ಲಕ್ಷ, ಶಾರದೋತ್ಸವ ಸಮಿತಿಗೆ ರೂ 55,555/-, ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದು ಲ್ಯಾಪ್ ಟಾಪ್ ಹಾಗೂ ಪ್ರಿಂಟರ್, ಯಳಜಿತ್ ಶಾಲೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ರೂ 50,000/- , ರಾಷ್ಟ್ರೀಯ ಸೇವಾ ಯೋಜನೆಗೆ ರೂ 10,000/- ಸೇರಿದಂತೆ ಒಟ್ಟು ರೂ 2.80 ಲಕ್ಷ ದೇಣಿಗೆಯನ್ನು ವಿವಿಧ ಸಂಘ ಸಂಸ್ಥೆಗಳಿಗೆ ನೀಡಲಾಯಿತು.