ನಿರಖು ಠೇವಣಿ
ಸಹಕಾರಿಯ ಸದಸ್ಯ/ಸದಸ್ಯೆ, ಮೂರು ತಿಂಗಳಿಗೊಮ್ಮ ಬಡ್ಡಿಯ ಅವಶ್ಯಕತೆಯಿದ್ದಲ್ಲಿ ನಿರಖು ಠೇವಣಿಯಲ್ಲಿ ಹೂಡಿಕೆ ಮಾಡಬಹುದು.
ಈ ಠೇವಣಿಯಲ್ಲಿ ಕನಷ್ಟ ವಿನಿಯೋಗ 1000 ರೂಪಾಯಿ ಕನಿಷ್ಟ ಅವಧಿ 30 ದಿನಗಳು ಹಾಗೂ ಗರಿಷ್ಟ ಅವಧಿ 5 ವರ್ಷಗಳು ಹಾಗೂ ಈ ಠೇವಣಿಗೆ ಬಡ್ದಿಯನ್ನು ನಿಗದಿತ ದರದಲ್ಲಿ ಮೂರು ತಿಂಗಳಿಗೊಮ್ಮೆ ಪಾವತಿಸಲಾಗುವುದು. ಸದಸ್ಯರು ನಮ್ಮ ಸಹಕಾರಿಯಲ್ಲಿಯೇ ಉಳಿತಾಯ ಖಾತೆಯನ್ನು ತೆರೆದರೆ ಅವರ ಖಾತೆಗೆ ಜಮಾ ಮಾಡಲಾಗುವುದು ಇತರೇ ಬ್ಯಾಂಕಗಳ ಖಾತೆಗಳಾದರೆ ವಿವರ ನೀಡಿದಲ್ಲಿ ಅವರ
ಖಾತೆಗೆ ಜಮಾ ಮಾಡಲಾಗುವುದು.
ಬಡ್ಡಿಯನ್ನು ಪ್ರತಿ ಕೆಲೆಂಡರ್ ವರ್ಷದ ತ್ರೈಮಾಸಿಕದ ( ಮಾರ್ಚ, ಜೂನ್, ಸಪ್ಟಂಬರ್ ಹಾಗೂ ಡಿಸೆಂಬರ್ ತಿಂಗಳ) ಕೊನೆಯ ವಾರದ ಯಾವುದಾದರೊಂದು ದಿನ
ಪಾವತಿಸಲಾಗುವುದು.
ಈ ಠೇವಣಿಯ ಆಧಾರದಲ್ಲಿ ಠೇವಣಿಯ ಬಡ್ದಿ ದರಕ್ಕಿಂತ 2 % ಹೆಚ್ಚಿನ ದರದಲ್ಲಿ ವಿನಿಯೋಗದ ಮೊತ್ತದ ಶೇ 80 ರಷ್ಟು ಸಾಲ ಪಡೆಯಬಹುದು
ಈ ಠೇವಣಿಗೆ ನಾಮ ನಿರ್ದೇಶನ ಸೌಲಭ್ಯವಿದೆ